Last Updated:
Darshan Case: ದರ್ಶನ್ ಪರ ಸಾಕ್ಷ್ಯ ನುಡಿದ ಯಶಸ್ ಸೂರ್ಯನ ಬಗ್ಗೆ ಎಸ್ಪಿಪಿ ಹೇಳಿದ ಮಾತೇನು ಗೊತ್ತಾ? ದರ್ಶನ್ ಪರ ಏನಂದ್ರು ಯಶಸ್ ಸೂರ್ಯ?
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಸಾಕ್ಷಿ ನುಡಿಸಿದ್ದಾರೆ. ದರ್ಶನ್ (Darshan) ಪರವಾಗಿ ಯಶಸ್ ಸೂರ್ಯ (Yashas Surya) ಸಾಕ್ಷ್ಯ ನುಡಿದಿದ್ದು ಹೀಗಾಗಿ ಈ ವಿಟ್ನೆಸ್ ನ ಹಾಸ್ಟೈಲ್ ವಿಟ್ನೆಸ್ (Hostile Witness) ಅಂತ ಪರಿಗಣಿಸುವಂತೆ ಎಸ್ಪಿಪಿ (SPP) ಮನವಿ ಮಾಡಿದ್ದಾರೆ. ಜೊತೆಗೆ ಕ್ರಾಸ್ ಎಗ್ಸಾಮಿನ್ಗೆ ಅವಕಾಶ ಕೋರಿ ಎಸ್ಪಿಪಿ ಮನವಿ ಮಾಡಿದ್ದಾರೆ.
ಯಶಸ್ ಸೂರ್ಯ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಎಸ್ಪಿಪಿ ಅವರು ಕೋರ್ಟ್ಗೆ ಹೇಳಿದ್ದು ಯಶಸ್ ಭಾಗಶಃ ಹಾಸ್ಟೈಲ್ ಆಗಿದ್ದಾರೆ ಅಂತ ಜಡ್ಜ್ ಗೆ ಹೇಳಿದ್ದಾರೆ. ಕ್ರಾಸ್ ಎಕ್ಸಾಮಿನ್ ಗೆ ಕೋರ್ಟ್ ಅವಕಾಶ ಕೊಟ್ಟಿದ್ದು ಯಶಸ್ ಸೂರ್ಯ ಕ್ರಾಸ್ ಎಕ್ಸಾಮಿನ್ ಗೆ ಎಸ್ಪಿಪಿ ಸಮಯಾವಕಾಶ ಕೋರಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ಗೆ ನಟ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಹಾಜರಾಗಿದ್ದಾರೆ. ಈ ಇಬ್ಬರು ನಟರಿಗೂ ಕೋರ್ಟ್ ಸಮನ್ಸ್ ನೀಡಿದ್ದು, ಕೊಲೆಗೂ ಮೊದಲು ಏನೆಲ್ಲಾ ಬೆಳವಣಿಗೆ ನಡೀತು? ಸ್ಟೋನಿ ಬ್ರೂಕ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಜೊತೆ ನಟ ದರ್ಶನ್ ಏನೆಲ್ಲಾ ಚರ್ಚೆ ಮಾಡಿದ್ದರು ಎನ್ನುವ ವಿಚಾರದ ಬಗ್ಗೆ ಇಂದು ನಟರು ಸಾಕ್ಷಿ ನುಡಿಯುತ್ತಿದ್ದಾರೆ.
ದರ್ಶನ್ ಪರಿಚಯದ ಬಗ್ಗೆ ಯಶಸ್ ಸೂರ್ಯ ಹೇಳಿಕೆ ದಾಖಲಿಸಿದ್ದು ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ ಊಟದ ಬಗ್ಗೆ ಹೇಳಿಕೆ ದಾಖಲಿಸಲಾಗಿದೆ. ದರ್ಶನ್, ಪ್ರದೂಷ್, ಚಿಕ್ಕಣ್ಣ, ನಾಗರಾಜ್, ವಿನಯ್ ರೆಸ್ಟೋರೆಂಟ್ ನಲ್ಲಿ ಇದ್ವಿ ಅಂತ ಹೇಳಿಕೆ ಕೊಟ್ಟಿದ್ದು ಸಿನಿಮಾ ವಿಚಾರ ಮಾತನಾಡಿದ್ವಿ ಅಂತ ಯಶಸ್ ಹೇಳಿಕೆ ಕೊಟ್ಟಿದ್ದಾರೆ.
ಆರೋಪಿ ಪವನ್ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ ಗೆ ಬಂದಿರೋ ಬಗ್ಗೆ ನನಗೆ ಗೊತ್ತೇ ಇಲ್ಲ ಅಂದ ಯಶಸ್ ಸೂರ್ಯ ಈ ವೇಳೆ ನಾನು ಹೊರಗಡೆ ಇದ್ದೆ ಎಂದಿದ್ದಾರೆ.
ಸಾಕ್ಷಿ ಹೇಳಿಕೆ ದಾಖಲು ವೇಳೆ ಫುಲ್ ಟೆನ್ಷನ್ ಆಗ್ತಿರೋ ನಟ ಚಿಕ್ಕಣ್ಣ ಅವರಿಗೆ ಟೆನ್ಷನ್ ಆಗಬೇಡಿ ನೀವೇನು ಕ್ರೈಂ ಮಾಡಿಲ್ಲ ಎಂದು ಎಸ್ಪಿಪಿ ಸಮಾಧಾನ ಮಾಡಿದ್ದಾರೆ. ಸ್ವಲ್ಪ ಸಮಯ ತಗೊಂಡು ಮತ್ತೆ ಚಿಕ್ಕಣ್ಣ ಹೇಳಿಕೆ ದಾಖಲಿಸಿದ್ದಾರೆ.
ಸದ್ಯ ಇಬ್ಬರ ಹೇಳಿಕೆಯೂ ಅರ್ಧ ದಾಖಲಾಗಿದ್ದು ಇದಕ್ಕೆ ಇನ್ನೊಂದು ದಿನವನ್ನು ನಿಗದಿ ಮಾಡಲಾಗುತ್ತದೆ.
ವರದಿ: ಮಂಜುನಾಥ್ ಎನ್. ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು



