ಧನ್ಯವಾದ ಕನ್ನಡಿಗರೇ, ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್ ವೆಬ್‌ಸೈಟ್ ಈಗ ನಂಬರ್ 1! | Suvarna Tv S Asianetnews Website That Rose To The Number 1 Spot In The Comscore Report Mrq


ಕನ್ನಡಿಗರ ನಿರಂತರ ಪ್ರೋತ್ಸಾಹದಿಂದ ಸುವರ್ಣ ನ್ಯೂಸ್‌ನ kannada.asianetnews.com ವೆಬ್‌ಸೈಟ್ ಕಾಮ್‌ಸ್ಕೋರ್ ರೇಟಿಂಗ್‌ನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಆಗಸ್ಟ್ ತಿಂಗಳ ವರದಿಯಂತೆ 3.6 ಮಿಲಿಯನ್ ಯೂನಿಕ್ ಯೂಸರ್ಸ್ ಪಡೆದು ಇತರ ಎಲ್ಲಾ ಕನ್ನಡ ವೆಬ್‌ಸೈಟ್‌ಗಳನ್ನು ಹಿಂದಿಕ್ಕಿದೆ. ಈ ಸಾಧನೆಗೆ ಕಾರಣರಾದ ಓದುಗರಿಗೆ ಸಂಸ್ಥೆಯು ಧನ್ಯವಾದ ತಿಳಿಸಿದೆ.

ಕನ್ನಡಿಗರ ಅಚ್ಚು ಮೆಚ್ಚಿನ ಸುವರ್ಣ ನ್ಯೂಸ್ ನ kannada.asianetnews.com ವೆಬ್ ಸೈಟ್ ಈಗ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಕನ್ನಡಿಗರ ನಿರಂತರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಪ್ರೀತಿಯಿಂದ ಇಂಥ ಮಹತ್ವದ ಮೈಲಿಗಲ್ಲು ಸಾಧಿಸಲು ಈಗ ಸಾಧ್ಯವಾಗಿದೆ.

ವೆಬ್‌ಸೈಟ್‌ಗಳ ರೇಟಿಂಗ್ ಸಂಸ್ಥೆಯಾದ ಕಾಮ್ ಸ್ಕೋರ್ ಪ್ರತಿ ತಿಂಗಳು ತನ್ನ ರೇಟಿಂಗ್ ಅನ್ನು ಪ್ರಕಟಿಸುತ್ತದೆ. ಅದರ ರೇಟಿಂಗ್ ಅನ್ವಯ ಸುವರ್ಣ ನ್ಯೂಸ್‌ನ kannada.asianetnews.com ವೆಬ್‌ಸೈಟ್ ಅಗಸ್ಟ್ ತಿಂಗಳಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಕಾಮ್ ಸ್ಕೋರ್ ಬಿಡುಗಡೆಗೊಳಿಸುವ ಪಟ್ಟಿಯಲ್ಲಿ ಇನ್ನುಳಿದ ಕನ್ನಡದ ಎಲ್ಲಾ ವೆಬ್ಸೈಟ್ಗಳನ್ನು ಹಿಂದಿಕ್ಕಿ ಏಷ್ಯಾನೆಟ್ ನ್ಯೂಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಆಗಸ್ಟ್-2026ರಲ್ಲಿ ನಿಮ್ಮ ಏಷ್ಯಾನೆಟ್ ನ್ಯೂಸ್ 3.6 ಮಿಲಿಯನ್ ಯೂನಿಕ್ ಯೂಸರ್ಸ್ ಪಡೆದುಕೊಳ್ಳುವ ಮೂಲಕ ನಂಬರ್ ಒನ್ ಕನ್ನಡದ ವೆಬ್ಸೈಟ್ ಆಗಿ ಹೊರಹೊಮ್ಮಿದೆ.

ಕರ್ನಾಟಕದ ನಂಬರ್ ಒನ್ ವೆಬ್ಸೈಟ್ ಆಗಿರುವ ಸುವರ್ಣ ನ್ಯೂಸ್ ನ kannada.asianetnews.com ಜಿಲ್ಲೆ, ರಾಜ್ಯ, ಮನರಂಜನೆ, ಕ್ರೀಡೆ, ವ್ಯಾಪಾರ, ಆಟೋಮೊಬೈಲ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ವಿಸ್ತೃತವಾಗಿ ಜನರ ಮುಂದೆ ನೀಡುತ್ತದೆ. ಹಾಗೆಯೇ ರಾಜ್ಯ, ದೇಶ ಮತ್ತು ವಿಶ್ವದಲ್ಲಿ ನಡೆಯುವ ಬೆಳವಣಿಗೆಯನ್ನು ಕ್ಷಣ ಮಾತ್ರದಲ್ಲಿ ಓದುಗರಿಗೆ ನೀಡಲಾಗುತ್ತದೆ.

ಪ್ರಾಮಾಣಿಕ ಕೆಲಸವನ್ನು ಕನ್ನಡಿಗರು ಎಂದಿಗೂ ಗುರುತಿಸಿಯೇ ಗುರುತಿಸುತ್ತಾರೆ. ಅನ್ನೋದಕ್ಕೆ ಉದಾಹರಣೆಯಾಗಿರುವ ಸುವರ್ಣ ನ್ಯೂಸ್ kannada.asianetnews.com ವೆಬ್ ಸೈಟ್ ಕೂಡ ಈಗ ನಂಬರ್ ಒನ್ ಆಗಲು ಸಾಧ್ಯವಾಗಿದೆ.

ಕನ್ನಡಿಗರೆ ನಿಮ್ಮ ಪ್ರೋತ್ಸಾಹದಿಂದಾಗಿ ನಂಬರ್ ಒನ್ ಆಗಿರುವ ನಮಗೆ, ಜವಾಬ್ದಾರಿ ಇನ್ನೂ ಹೆಚ್ಚಿದಂತಾಗಿದೆ. ನೀವು ಇಟ್ಟ ನೀರೀಕ್ಷೆಯನ್ನು ಖಂಡಿತವಾಗಿ ಮತ್ತಷ್ಟು ಗಟ್ಟಿಗೊಳಿಸಲು ಕಟ್ಟಿಬದ್ಧರಾಗಿದ್ದೇವೆ. ನೀವು ನೀಡಿದ ಅಪಾರ ಪ್ರೀತಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.



Source link

Scroll to Top