ಮಂಡ್ಯ ಮೇಡಂಗೆ BJP ಟೋಪಿ ಹಾಕಿತು! ಸುಮಲತಾ ಅಂಬರೀಶ್‌ ಬಗ್ಗೆ HD ರೇವಣ್ಣ ವ್ಯಂಗ್ಯ – ಹೀಗೆ ಹೇಳಿದ್ದೇಕೆ? – bjp puts hat on mandya madam hd revanna’s sarcasm about sumalatha ambareesh


ಬೆಂಗಳೂರು: ರಾಜ್ಯಸಭಾ ಟಿಕೆಟ್‌ ವಿಚಾರದಲ್ಲಿ ಮಾಜಿ ಸಂಸದೆ ಸುಮಲತಾ ಅವರಿಗೆ ಬಿಜೆಪಿ ಮೋಸ ಮಾಡಿದೆ ಎಂದು ಎಚ್‌ಡಿ ರೇವಣ್ಣ ಪರೋಕ್ಷ ಹೇಳಿದ್ದಾರೆ. ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪಾಪಾ ಮಂಡ್ಯ ಮೇಡಂಗೆ ಬಿಜೆಪಿ ಟೋಪಿ ಹಾಕಿದರು ಎಂದಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಕರ್ನಾಟಕ ವಿಧಾನ ಪರಿಷತ್ ಚುನಾವಣೆ ನಡೆಯಿತು. ಮತ ಚಲಾವಣೆಗೆ ಆಗಮಿಸಿದ್ದ ಎಚ್‌ಡಿ ರೇವಣ್ಣ ಅವರು ಮಾಧ್ಯಮಗಳಿಗೆ ರಾಜ್ಯಸಭೆ ಟಿಕೆಟ್‌ ವಿಚಾರದಲ್ಲಾದ ಗೊಂದಲದ ಬಗ್ಗೆ ಮಾತನಾಡಿದರು.

ಮೊದಲಿಗೆ ಇಬ್ಬರು ಗೌಡರ ಹೆಸರಿತ್ತು

ರಾಜ್ಯಸಭಾ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಮೊದಲಿಗೆ ದೇವೇಗೌಡರು, ಸದಾನಂದ ಗೌಡರ ಹೆಸರಿತ್ತು. ಆ ಮೇಲೆ ಮಂಡ್ಯ ಮೇಡಂ ಹೆಸರು ಹೇಳಿದರು. ಕೊನೆಗೆ ಅವರಿಗೆ ಟೂಪಿ ಹಾಕಿದ್ದಾರೆ. ಪಾಪ ಅವರಿಗೆ ಕೊಡಬೇಕಿತ್ತು. ನಮ್ಮ ಸಮಾಜದವರು ಇರುತ್ತಿದ್ದರು. ಈ ಹಿಂದಿನ ಎಲ್ಲಾ ಚುನಾವಣೆ ನೋಡಿದ್ದೇನೆ. ಮುಂದೇನು ಆಗುತ್ತದೆ ಕಾದು ನೋಡೋಣ ಎಂದರು.

ದೇವೇಗೌಡರು ಪ್ರಧಾನಿ ಸ್ಥಾನವನ್ನೇ ಬಿಟ್ಟವರು

ದೇವೇಗೌಡರು ಯಾವತ್ತೂ ಅಧಿಕಾರಕ್ಕಾಗಿ ಯಾರ ಮನೆ ಮುಂದೆ ಹೋಗಿಲ್ಲ. ಒಂದು ಪ್ರಧಾನ ಮಂತ್ರಿ ಹುದ್ದೆ ತ್ಯಾಗ ಮಾಡಿದ್ದಾರೆ. ಅಂದಿನ ಕಾಲಕ್ಕೆ ಒಂದು ಕ್ಷಮೆ ಕೇಳಿದ್ದರೆ 5 ವರ್ಷ ಪೂರ್ತಿ ಪ್ರಧಾನಿ ಹುದ್ದೆ ಮುಂದುವರೆಯುತ್ತಿತ್ತು. ವಾಜಪೇಯಿ ಅವರು ಕೂಡ ಬೆಂಬಲ ಕೊಡಲು ಸಿದ್ಧರಿದ್ದರು. ಆದರೆ, ದೇವೇಗೌಡರು ಬಿಟ್ಟು ಬಂದರು. ಅಂತಹವರು, ರಾಜ್ಯಸಭಾ ಸ್ಥಾನಕ್ಕೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದರು.

ರಾಜ್ಯಸಭೆಗೆ ಪುನಃ ಹೋಗಲು ದೇವೇಗೌಡರೇನೂ ಅರ್ಜಿ ಹಾಕಿರಲಿಲ್ಲ

ಬಿಜೆಪಿಯಿಂದ ರಾಜ್ಯಸಭೆ ಚುನಾವಣೆಗೆ ಹಿರಿಯ ಮುಖಂಡ ಪ್ರೊ.ಎಂ.ನಾಗರಾಜ್‌ ಕಣಕ್ಕಿಳಿದಿದ್ದರು. ‘‘ ರಾಜ್ಯಸಭೆ ಟಿಕೆಟ್‌ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಬಗ್ಗೆ ಇಲ್ಲದ ಅನುಕಂಪ ಈಗ ಬಂದಿದೆ. ವಾಸ್ತವವಾಗಿ ರಾಜ್ಯಸಭೆ ಟಿಕೆಟ್‌ಗಾಗಿ ದೇವೇಗೌಡರು ಅರ್ಜಿಯನ್ನೇ ಹಾಕಿಲ್ಲ ’’ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಈ ಹಿಂದೆ ಸ್ಪಷ್ಟಪಡಿಸಿದ್ದರು.

ಮಂಡ್ಯ ತಾಲೂಕಿನ ತಗ್ಗಹಳ್ಳಿ ಸರಕಾರಿ ಶಾಲೆ ಆವರಣದಲ್ಲಿ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಜೆಡಿಎಸ್‌ ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ಸಿಗರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೇಲೆ ಅನುಕಂಪದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ಟೀಕಿಸಿದ್ದರು.

 ಜಯಪ್ರಕಾಶ್‌ ಬಿರಾದಾರ್‌

ಲೇಖಕರ ಬಗ್ಗೆ ಜಯಪ್ರಕಾಶ್‌ ಬಿರಾದಾರ್‌ಜಯಪ್ರಕಾಶ್‌ ಬಿರಾದಾರ್ ಅವರು ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ನ್ಯೂಸ್‌ ಕಂಟೆಂಟ್‌ ಪ್ರೊಡ್ಯೂಸರ್‌. ಪತ್ರಿಕೋದ್ಯಮದಲ್ಲಿ 9 ವರ್ಷಗಳ ಅನುಭವವಿದೆ. ಬೆಂಗಳೂರು, ದಾವಣಗೆರೆಯಲ್ಲಿ ವರದಿಗಾರಿಕೆ ಮಾಡಿದ್ದಾರೆ. ರೈಲ್ವೇ, KSRTC, BMTC, ನಮ್ಮ ಮೆಟ್ರೋ, ಬಿಡಿಎ, ಬಿಬಿಎಂಪಿ, ಜಲಮಂಡಳಿ, ಆರೋಗ್ಯ, ವಸತಿ, ನ್ಯಾಯಾಂಗ, ಹವಾಮಾನ, ಅರಣ್ಯ ಹಾಗೂ ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ವರದಿಗಳು, ವಿಶೇಷ ಲೇಖನಗಳನ್ನು ಬರೆಯುವುದರಲ್ಲಿ ಪರಿಣಿತರು.

ಶೈಕ್ಷಣಿಕ ವಿವರ:
​​ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಉತ್ತೀರ್ಣರಾಗಿದ್ದಾರೆ.

ಪತ್ರಿಕೋದ್ಯಮದಲ್ಲಿ ನಡೆದು ಬಂದ ಹಾದಿ:​
2017 ರಲ್ಲಿ ​​ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಪ್ರಜಾವಾಣಿಯಲ್ಲಿ ಟ್ರೈನಿ ಜರ್ನಲಿಸ್ಟ್‌ ಆಗಿದ್ದರು. ನಂತರ ಉದಯವಾಣಿ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ 4 ವರ್ಷ ವರದಿಗಾರರಾಗಿ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 1.5 ವರ್ಷ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ಸಾರಿಗೆ, ಮೂಲಸೌಕರ್ಯ, ಅರಣ್ಯ, ಆರೋಗ್ಯ, ಕರ್ನಾಟಕ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು 1 ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. 2023ರಿಂದ ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿದ್ದಾರೆ.

​ವಿಶೇಷತೆ ಮತ್ತು ಪರಿಣತಿ:
​​ಸುದ್ದಿ ಹುಡುಕುವುದು ಮಾತ್ರ​ಲ್ಲದೇ, ಅದನ್ನ ಸರಳವಾಗಿ ಬರೆದು, ಅಗತ್ಯ ವಿಶ್ಲೇಷಣೆ ಮಾಡುತ್ತಾರೆ. ಎಸ್‌ಇಒಗಳ ಜತೆ, ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡಿ ಆಕರ್ಷಿಕ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಓದುಗರಿಗೆ ತಲುಪಿಸುತ್ತಾರೆ. ಹೊಸ ರೈಲು, ನಮ್ಮ ಮೆಟ್ರೋ, ಕೆಎಸ್‌ಆರ್‌ಟಿಸಿ ಬಿಎಂಟಿಸಿ, ವಿಮಾನ ನಿಲ್ದಾಣಗಳ ಯೋಜನೆ, ಹವಾಮಾನ, ಬೆಂಗಳೂರು ನಾಗರೀಕ ಸೇವೆಗಳು ಕುರಿತು ಬರೆದು ಓದುಗರಿಗೆ ಹತ್ತಿರವೆನಿಸಿದ್ದಾರೆ. ​ಓದುಗರ ಅಭಿರುಚಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ಟೂಲ್ಸ್, ಗೂಗಲ್ ಅನಾಲಿಟಿಕ್ಸ್ ಬಳಕೆಯು ಗೊತ್ತು.

ಪುರಸ್ಕಾರ : ನ್ಯೂಸ್‌ ಟೀಮ್‌ನಲ್ಲಿಯೇ ಅತಿ ಹೆಚ್ಚು ಓದುಗರನ್ನ ಹೊಂದಿರುವ ಇವರಿಗೆ ಟೈಮ್ಸ್‌ ಇಂಟರ್ನೆಟ್‌ನಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಹಲವಾರು ವಿಶೇಷ ಪ್ರಶಸ್ತಿಗಳನ್ನು ನೀಡಲಾಗಿದೆ. ​ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿ, ಪ್ರಶಸ್ತಿ ಕಾರ್ಯಕ್ರಮಗಳ ಆಯೋಜನೆ, ನಿರ್ವಹಣೆ ಮಾಡುವ ಕೌಶಲ್ಯವಿದೆ. ವಿಜಯ ಕರ್ನಾಟಕ ಡಿಜಿಟಲ್ ನ ಶಕ್ತಿ ಸಂವಾದ ಕಾರ್ಯಕ್ರಮಗಳ ಆಯೋಜನೆ ತಂಡದ ಪ್ರಮುಖರಲ್ಲೊಬ್ಬರು.

​ವರದಿ ಮಾಡಿದ ಪ್ರಮುಖ ವಿದ್ಯಮಾನಗಳು : ​ಏರೋ ಇಂಡಿಯಾ (2019, 2021, 2023, 2025), ಕರ್ನಾಟಕ ವಿಧಾನಮಂಡಲ ಅಧಿವೇಶಗಳು, ಇಸ್ರೋ ಚಂದ್ರಯಾನ 2, ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಸಮೀಕ್ಷೆ, ಮತದಾನ, ಫಲಿತಾಂಶ ವರದಿಗಾರಿಕೆ. ಪ್ರಧಾನಿ ಮೋದಿ ಬೆಂಗಳೂರು ರೋಡ್‌ ಶೋ, ಸಿದ್ಧರಾಮೋತ್ಸವ 2022, ಕೊರೊನಾ ಸಾಂಕ್ರಾಮಿಕ, ಕರ್ನಾಟಕ ಬಜೆಟ್‌, ಬಿಬಿಎಂಪಿ ಬಜೆಟ್‌, ಕೃಷಿ ಮೇಳ, ಬೆಂಗಳೂರು ಟೆಕ್‌ಸಮ್ಮಿಟ್‌, ವಂದೇ ಭಾರತ್ ರೈಲು ಆರಂಭ, ಬೆಂಗಳೂರು ಏರ್‌ಪೋರ್ಟ್‌ ಟರ್ಮಿನಲ್ 2 ಚಾಲನೆ, ನಮ್ಮ ಮೆಟ್ರೋ ಹೊಸ ಮಾರ್ಗಗಳ ಉದ್ಘಾಟನೆ.

​​​ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳದವರು. ದಾವಣಗೆರೆಯಲ್ಲಿ ಶಿಕ್ಷಣ ಪೂರೈಸಿದ್ದು, ಬೆಂಗಳೂರಿನಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರವಾಸ, ಕ್ರಿಕೆಟ್, ಫೋಟೋಗ್ರಫಿ, ಓದು, ಸಿನಿಮಾ ನೋಡುವುದು ಇವರ ಹವ್ಯಾಸಗಳು.

ನೈಪುಣ್ಯತೆ ಇರುವ ಕ್ಷೇತ್ರಗಳು : ಬೆಂಗಳೂರು ಮೆಟ್ರೋ, ಭಾರತೀಯ ರೈಲ್ವೆ, ಬೆಂಗಳೂರು ಮಹಾನಗರ ಪಾಲಿಕೆ ಇತ್ಯಾದಿ.… ಇನ್ನಷ್ಟು ಓದಿ



Source link

Scroll to Top