ಹೊಸ ಕಾರು ಖರೀದಿ ಮಾಡಿದ ರಕ್ಷಿತಾ ಶೆಟ್ಟಿ,Photos: ಫ್ಯಾಮಿಲಿಯಲ್ಲೇ ಮೊದಲ ಕಾರು ತಗೊಂಡು ಸಂಭ್ರಮ ಪಟ್ಟ ‘ಬಿಗ್ ಬಾಸ್’ ರಕ್ಷಿತಾ ಶೆಟ್ಟಿ! – bigg boss kannada 12 contestant rakshitha shetty becomes proud owner of new car


‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಭರ್ಜರಿ ಸೌಂಡ್ ಮಾಡಿದವರು ರಕ್ಷಿತಾ ಶೆಟ್ಟಿ. ‘ಬಿಗ್ ಬಾಸ್’ ಮನೆಯಲ್ಲಿ ಇರುವಾಗ ರಕ್ಷಿತಾ ಶೆಟ್ಟಿ ‘ಪಟಾಕಿ ರಕ್ಷಿತಾ’ ಎಂದೇ ಫೇಮಸ್ ಆಗಿದ್ದರು. ದೊಡ್ಮನೆ ಆಟದಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆದರು. ಕನ್ನಡಿಗರ ಮನೆ ಮಾತಾದರು. ಇದೀಗ ರಕ್ಷಿತಾ ಶೆಟ್ಟಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ಹೌದು.. ರಕ್ಷಿತಾ ಶೆಟ್ಟಿ ಹೊಸ ಕಾರು ಖರೀದಿ ಮಾಡಿದ್ದಾರೆ. ಕಪ್ಪು ಬಣ್ಣದ ಕಾರಿಗೆ ರಕ್ಷಿತಾ ಶೆಟ್ಟಿ ಒಡತಿ ಆಗಿದ್ದಾರೆ. ಹಾಗ್ನೋಡಿದ್ರೆ, ರಕ್ಷಿತಾ ಶೆಟ್ಟಿ ಫ್ಯಾಮಿಲಿಯಲ್ಲೇ (ಅಮ್ಮನ ಮನೆ ಕಡೆ) ಇದು ಮೊದಲ ಕಾರು. ಕುಟುಂಬದಲ್ಲೇ ಮೊದಲ ಕಾರು ಖರೀದಿಸಿ ಹೊಸ ಸಾಧನೆ ಮಾಡಿದ್ದಾರೆ ರಕ್ಷಿತಾ ಶೆಟ್ಟಿ. ಫೋಟೋ ಆಲ್ಬಂ ಇಲ್ಲಿದೆ ನೋಡಿ…



Source link

Scroll to Top