ಮಂಡ್ಯ ರಮೇಶ್‌ ಸಹೋದರ ನಿಧನ: ಅಣ್ಣ ಆನಂದ್ ಕುಮಾರ್‌ ಅಗಲಿಕೆ ನೋವಲ್ಲಿ ನಟ – mandya ramesh’s elder brother anand kumar passes away


ಖ್ಯಾತ ನಟ ಮಂಡ್ಯ ರಮೇಶ್‌ ಅವರ ಸಹೋದರ ಕೆ.ಎಸ್‌ ಆನಂದ್‌ ಕುಮಾರ್‌(65) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಕುವೆಂಪು ನಗರದ ನಿವಾಸದಲ್ಲಿ ಜೀವಬಿಟ್ಟಿದ್ದಾರೆ.

ಹೈಲೈಟ್ಸ್‌:

  • ನಟ ಮಂಡ್ಯ ರಮೇಶ್ ಸಹೋದರ ಇನ್ನಿಲ್ಲ
  • ಮಂಡ್ಯ ರಮೇಶ್‌ ಹಿರಿಯ ಸಹೋದರ ನಿಧನ
  • ಹೃದಯಾಘಾತಕ್ಕೆ ಬಲಿಯಾದ ಮಂಡ್ಯ ರಮೇಶ್‌ ಅಣ್ಣಾ
Mandya Ramesh Brother
(ಗ್ಯಾಲರಿ– Vijaya Karnataka Web)
ಖ್ಯಾತ ನಟ ಮಂಡ್ಯ ರಮೇಶ್‌ ಅವರ ಸಹೋದರ ಕೆ.ಎಸ್‌ ಆನಂದ್‌ ಕುಮಾರ್‌ ಅವರು ಹೃದಯಾಘಾತದಿಂದ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇವರಿಗೆ 65ವರ್ಷ ವಯಸ್ಸಾಗಿತ್ತು. ಅಣ್ಣನ ಅಗಲಿಕೆ ವಿಚಾರವನ್ನ ತಮ್ಮ ಸೋಶಿಯಲ್‌ ಮೀಡಿಯಾ ಖಾತೆ ಮೂಲಕ ಮಂಡ್ಯ ರಮೇಶ್‌ ಅವರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಅಂದ್ರ ಜುಲೈ 15ರಂದು ಘಟನೆ ನಡೆದಿದೆ.

ಸಿನಿಮಾ ಸೋತರೆ, ಧಾರಾವಾಹಿಯನ್ನು ಎಳೆದರೆ ಪ್ರೇಕ್ಷಕರು ನೇರವಾಗಿ ಬೈತಾರೆ: ಒಲವಿನ ನಿಲ್ದಾಣ ಧಾರಾವಾಹಿ ನಟ ಮಂಡ್ಯ ರಮೇಶ್

ಮೈಸೂರಿನ ಕುವೆಂಪು ನಗರದ ನಿವಾಸದಲ್ಲಿ ಕೆ.ಎಸ್‌ ಆನಂದ್‌ಕುಮಾರ್‌ ಅವರು ಜೀವಬಿಟ್ಟಿದ್ದಾರೆ. ಇವರನ್ನ ಪ್ರೀತಿಯಿಂದ ಬಾಬು ಎಂದು ಕರೆಯುತ್ತಿದ್ದರು.

ರಂಗಭೂಮಿ ಕಲಾವಿದರು

ಆನಂದ್‌ಕುಮಾರ್‌ ಅವರು ರಂಗಭೂಮಿ ಕಲಾವಿದರಾಗಿದ್ದರು. ಪೋಷಕ ಪತ್ರಾಗಳಲ್ಲಿಯೂ ನಟಿಸಿದ್ದಾರೆ. ಸಹೋದರ ಮಂಡ್ಯ ರಮೇಶ್‌ ಅವರ ಕನಸಿಗೆ ಬೆಂಗಾವಲಾಗಿ ನಿಂತಿದ್ದರು. ನಟನ ರಂಗಶಾಲೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಕುಟುಂಬ

ಮಂಡ್ಯ ರಮೇಶ್‌ ಅವರ ಹಿರಿಯ ಸಹೋದರ ಕೆ.ಎಸ್ ಆನಂದ ಕುಮಾರ್(ಬಾಬು) ಅವರಿಗೆ ಪತ್ನಿ ಹಾಗೂ ಓರ್ವ ಪುತ್ರ ಇದ್ದಾರೆ.

ಕಂಬನಿ

ನಿನ್ನೆ ರಾತ್ರಿ ಅಂದ್ರೆ ಜುಲೈ 15ರಂದು ಆನಂದ್‌ಕುಮಾರ್‌ (22-02-1961 ರಿಂದ 15-07-2026) ಅವರು ಹೃದಯಾಘಾತದಿಂದ ಕುಸಿದಿದ್ದರು. ತಕ್ಷಣವೇ ಇವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಬೆಳಿಗ್ಗೆ ಸಕಲ ಕಾರ್ಯಗಳು ಜರುಗಿವೆ. ಮೈಸೂರಿನ ಚಿತಾಗಾರದಲ್ಲಿ ಪುತ್ರ ಕಾರ್ಯಗಳನ್ನ ನಿರ್ವಹಿಸಿದ್ದಾರೆ. ಸಿಹಿಕಹಿ ಚಂದ್ರು ಮತ್ತು ಗೀತಾ ಚಂದ್ರು ಅವರು ಸೇರಿದಂತೆ ಅನೇಕ ಆತ್ಮೀಯರು ಅಂತಿಮ ದರ್ಶನ ಪಡೆದಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಹಿರಿಯ ನಟಿ ಸುಧಾ ನರಸಿಂಹ ರಾಜು, ನಟಿ ಸುಷ್ಮಾ ನಾಣಯ್ಯ, ನೃತ್ಯ ಕಲಾವಿದ ಸಂಜಯ್‌ ಅವರು ಸೇರಿದಂತೆ ಅಭಿಮಾನಿಗಳು ಮಂಡ್ಯ ರಮೇಶ್‌ ಅವರ ಕುಟುಂಬ, ಸಹೋದರ, ರಂಗಭೂಮಿ ಕಲಾವಿದ ಕೆ.ಎಸ್‌ ಆನಂದ್‌ಕುಮಾರ್‌ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ವಿದ್ಯಾರ್ಥಿ ಕಂಬನಿ

“ಶ್ರೀ ಕೆ.ಎಸ್ ಆನಂದ ಕುಮಾರ್ ಸರ್‌ ಅವರು ನಮ್ಮನ್ನ ಅಗಲಿದ್ದಾರೆ. ನನ್ನ ಆತ್ಮೀಯ ಗುರುಗಳು ಹಾಗೂ ನನಗೆ ಅನೇಕ ರೀತಿಯ ಮಾರ್ಗದರ್ಶನ ನೀಡಿದ್ದರು. ನನ್ನ ಒಂದಷ್ಟು ಪ್ರಯತ್ನಗಳಿಗೆ ಪ್ರೋತ್ಸಾಹಿಸುತ್ತಿದ್ದ ಹಿರಿಯರು. ನನ್ನ ಮದುವೆಯಲ್ಲಿ ನಿಮ್ಮನ್ನ ಕೊನೆಯ ಬಾರಿ ಭೇಟಿ ಮಾಡಿದೆ. ಸರಳತೆ ಸದ್ಗುಣ, ನಿಮ್ಮ ನಗುಮುಖ, ನಿಮ್ಮ ಲವಲವಿಕೆ ಇವೆಲ್ಲವೂ ನೆನಪಷ್ಟೇ” ಎಂದು ಆನಂದ್ ಕುಮಾರ್‌ ಅವರ ಶಿಷ್ಯ ಓರ್ವವರು ಕಂಬನಿ ಮಿಡಿದಿದ್ದಾರೆ.

ಪ್ರಿಯಾಂಕಾ ಜಿನಗಿ

ಲೇಖಕರ ಬಗ್ಗೆಪ್ರಿಯಾಂಕಾ ಜಿನಗಿಲೇಖಕರ ಪರಿಚಯ : ಪ್ರಿಯಾಂಕಾ ಜಿನಗಿ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ಡಿಜಿಟಲ್‌ ಕಂಟೆಂಟ್ ಪ್ರೊಡ್ಯೂಸರ್ ಆಗಿದ್ದಾರೆ. ಪತ್ರಿಕೋದ್ಯಮದಲ್ಲಿ 5+ ವರ್ಷಗಳ ಅನುಭವ ಹೊಂದಿರುವ ಇವರು ಜನವರಿ, 2026ರಿಂದ ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ (ಟೈಮ್ಸ್ ಇಂಟರ್ನೆಟ್) ಎಂಟರ್‌ಟೇನ್ಮೆಂಟ್ ವಿಭಾಗದ ವರದಿಗಾರಿಕೆ, ಸಂದರ್ಶನ ಮಾಡುತ್ತಿದ್ದಾರೆ. ಟಿವಿ ಲೋಕಕ್ಕೆ ಸಂಬಂಧಿಸಿದ ಸುದ್ದಿಗಳು, ಲೇಖನಗಳನ್ನ ಸವಿಸ್ತಾರವಾಗಿ ಬರೆಯುತ್ತಿದ್ದಾರೆ.

ಶಿಕ್ಷಣ : ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಇದೇ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಲೇಜು ದಿನಗಳಲ್ಲಿ ‘ರಾಷ್ಟ್ರೀಯ ಸೇವಾ ಯೋಜನೆ’ಯಲ್ಲಿ (NSS) ಸಕ್ರಿಯರಾಗಿದ್ದರು. ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ (ABVP)ನಲ್ಲಿ ಕೆಲಸ ಮಾಡಿದ್ದಾರೆ.

ಕ್ರೀಡೆ-ಮನರಂಜನೆ : ಶಾಲೆ-ಕಾಲೇಜು ದಿನಗಳಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕಬಡ್ಡಿ, ವಾಲಿಬಾಲ್‌ನಲ್ಲಿ ಪ್ರಶಸ್ತಿ ಪಡೆದಿದ್ದಾರೆ. 2026ರಲ್ಲಿ ನಡೆದ ‘ವುಮನ್ಸ್‌ ಸೆಲೆಬ್ರಿಟಿ ಥ್ರೋ ಬಾಲ್‌ ಮತ್ತು ಕ್ರಿಕೆಟ್‘ನಲ್ಲಿ (WTC UTSAVA-2026) ಭಾಗಿಯಾಗಿದ್ದರು.

ಅಭಿನಯದಲ್ಲಿ ಆಸಕ್ತಿ ಹೊಂದಿರುವ ಪ್ರಿಯಾಂಕಾ ಜಿನಗಿ ಅವರು, 2025-2026ರಲ್ಲಿ ಎರಡು ಶಾರ್ಟ್ ಫಿಲ್ಮ್‌ನಲ್ಲಿ ಅಭಿನಯಿಸಿದ್ದಾರೆ. ಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶಾಂತಂ ಪಾಪಂ’ ಕ್ರೈಮ್‌ ಸೀರೀಸ್‌ನ ಸಂಚಿಕೆಯೊಂದರಲ್ಲಿ ಇನ್‌ವೆಸ್ಟಿಗೇಶನ್‌ ಪೊಲೀಸ್‌ ಆಫೀಸರ್ ಆಗಿ ಪಾತ್ರ ನಿರ್ವಹಿಸಿದ್ದರು. ನಾಟಕಗಳಲ್ಲೂ ಆಸಕ್ತಿ ಹೊಂದಿರುವು ಇವರು, ಕಾಲೇಜು ದಿನಗಳಲ್ಲಿ ರೈತನ ಕಷ್ಟಗಳ ಕುರಿತು ನಾಟಕ (ರೈತ ಮಹಿಳೆ), ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನದ ಕುರಿತು (ಮೈಮ್‌ ಆಕ್ಟ್‌) ಮಾಡಿ ಸೈ ಎನಿಸಿಕೊಂಡಿದ್ದಾರೆ. ವೃತ್ತಿ ಜೀವನದ ಆರಂಭದ ನಂತರ ಹವ್ಯಾಸಿ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದಾರೆ. ಮೈಸೂರು ದಸರಾದಲ್ಲಿ ಪ್ರದರ್ಶಿಸಲಾದ ‘ಅಶ್ವತ್ಥಾಮನ್‌’ ನಾಟಕದಲ್ಲಿ ಅಭಿನಯಿಸಿದ್ದಾರೆ. ಇದು ಖ್ಯಾತ ರಂಗಮಂದಿರ ‘ರಂಗಶಂಕರ’ದಲ್ಲಿ ಪ್ರದರ್ಶನಗೊಂಡಿತ್ತು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ‘ಮ್ಯಾಕ್‌ಬೆತ್‌’ ನಾಟಕದಲ್ಲಿ ಪ್ರಮುಖ ಪಾತ್ರ ‘ಲೇಡಿ ಮ್ಯಾಕ್‌ಬೆತ್‌’ಗೆ ಜೀವ ತುಂಬಿದ ಹೆಮ್ಮೆ ಇವರದ್ದು. ನೃತ್ಯದಲ್ಲೂ ಆಸಕ್ತಿ ಹೊಂದಿದ್ದಾರೆ. ಕ್ಲಾಸಿಕಲ್ ನೃತ್ಯವಾದ ‘ಕಥಕ್‌’ ಅಭ್ಯಾಸ ಮಾಡುತ್ತಿದ್ದಾರೆ.

ವೃತ್ತಿಜೀವನ : ಪ್ರಿಯಾಂಕಾ ಜಿನಗಿ ಅವರು, 2018ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ 5+ ವರ್ಷಗಳಲ್ಲಿ ಕನ್ನಡದ ನ್ಯೂಸ್ ಚಾನೆಲ್‌ಗಳು ಹಾಗೂ ಡಿಜಿಟಲ್‌ ಮೀಡಿಯಾಗಳಲ್ಲಿ ಟಿವಿ ವರದಿಗಾರ್ತಿಯಾಗಿ, ನಿರೂಪಕಿಯಾಗಿ, ಪ್ರೋಗ್ರಾಮ್‌ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ.

ವೃತ್ತಿ ಜೀವನದ ಆರಂಭದಲ್ಲಿ ‘ಟವಿ 5’ ಸುದ್ದಿ ವಾಹಿನಿಯಲ್ಲಿ ಇನ್ಟರ್ನ್‌ಶಿಪ್‌ ಮಾಡಿದ್ದಾರೆ. ನಂತರ ಬೆಳಗಾವಿಯ ಲೋಕಲ್‌ ಸುದ್ದಿ ವಾಹಿನಿ ‘ಇನ್‌ ನ್ಯೂಸ್‌’ನಲ್ಲಿ ಕೆಲಸ ಮಾಡಿದ್ದಾರೆ. ವಾರ್ತಾ ಇಲಾಖೆ ಬೆಳಗಾವಿಯಲ್ಲಿ ‘ವುಮನ್‌ ಅಪ್ರೆಂಟಿಸ್‌’ ಆಗಿ ಕಾರ್ಯ ನಿರ್ವಹಿಸಿದ್ದಾರೆ. ‘ವಿಶ್ವವಾಣಿ ಪತ್ರಿಕೆ’ಯಲ್ಲಿ ಸಬ್‌ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ‘ನ್ಯೂಸ್‌ ಫಸ್ಟ್‌’ ಸುದ್ದಿ ವಾಹಿನಿಯಲ್ಲಿ (2021 – 2025) ಕಿರುತೆರೆಗೆ ಸಂಬಂಧಪಟ್ಟ ‘ಮನೆ ಮನೆ ಮೀನಾಕ್ಷಿ’ ಕಾರ್ಯಕ್ರಮದ ಪ್ರೋಗ್ರಾಮ್‌ ಪ್ರೊಡ್ಯೂಸರ್ ಕಮ್‌ ವರದಿಗಾರ್ತಿಯಾಗಿ ಸಂದರ್ಶನಗಳನ್ನ ಮಾಡಿದ್ದಾರೆ. ಟಿವಿ ತಾರೆಯರು, ರಿಯಾಲಿಟಿ ಶೋಗಳ ಸ್ಪರ್ಧಿಗಳ ಜೊತೆಗೆ ಚಿಟ್‌-ಚಾಟ್‌ಗಳನ್ನ ಮಾಡಿ, ವೀಕ್ಷಕರಿಗೆ ಮನರಂಜನೆ ಲೋಕದ ಸುದ್ದಿಗಳನ್ನ ವಿಶುವಲ್ ಮೂಲಕ ಕೌಶಲ್ಯಭರಿತವಾಗಿ ಪ್ರಸ್ತುತ ಪಡಿಸಿದ್ದಾರೆ. ಬರವಣಿಗೆಯ ಜೊತೆಗೆ ಸುದ್ದಿಗಳಿಗೆ ಹಿನ್ನಲೆ ಧ್ವನಿ ನೀಡುವುದರಲ್ಲೂ ಪರಿಣಿತರು.

ಸದ್ಯ ಮತ್ತಷ್ಟು ಕಲಿಕೆಯ ಆಸಕ್ತಿ, ಹಸಿವಿನೊಂದಿಗೆ ವಿಜಯ ಕರ್ನಾಟಕ ಡಿಜಿಟಲ್‌ನ ಭಾಗವಾಗಿದ್ದಾರೆ.… ಇನ್ನಷ್ಟು ಓದಿ