ಇಂಗ್ಲಿಷ್ ಮಾಧ್ಯಮಕ್ಕೆ ಸಂದರ್ಶನ ಕೊಡುತ್ತ, ಟಾಕ್ಸಿಕ್ ಸಿನಿಮಾ ಸ್ಟೋರಿ ಲೀಕ್ ಮಾಡಿದ ನಟ‌ ಯಶ್ | Yash On The Story Telling Of Toxic Movie Suh


1947ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕರೂ, ಸುಂದರ ಕರಾವಳಿ ತೀರದ ಗೋವಾ ಮಾತ್ರ 1961ರವರೆಗೂ ಪೋರ್ಚುಗೀಸರ ಆಳ್ವಿಕೆಯಲ್ಲೇ ಇತ್ತು. ಪೋರ್ಚುಗೀಸರು ಮತ್ತು ಭಾರತೀಯರ ಮಿಶ್ರ ಸಂಸ್ಕೃತಿ, ಬಂದರುಗಳ ವ್ಯಾಪಾರ, ಕಳ್ಳಸಾಗಣೆ ಮತ್ತು ಅಧಿಕಾರದ ಆಟ ನಡೆಯುತ್ತಿದ್ದ ಆ ಕಾಲಘಟ್ಟವೇ ‘ಟಾಕ್ಸಿಕ್’ ಚಿತ್ರದ ಕಥೆಗೆ ಪ್ರಮುಖ ಹಿನ್ನೆಲೆ ಎನ್ನಲಾಗಿದೆ. ಈ ಅವಧಿಯಲ್ಲಿ ಕೇವಲ ವ್ಯಾಪಾರ ಮಾತ್ರ ನಡೆಯುತ್ತಿರಲಿಲ್ಲ. ಅಧಿಕಾರದ ದಾಹ, ಹಣದ ಮೇಲಿನ ಆಸೆ, ಬಂದರುಗಳ ಮೇಲಿನ ಹಿಡಿತ ಮತ್ತು ಗ್ಯಾಂಗ್‌ಸ್ಟರ್‌ಗಳ ಅಟ್ಟಹಾಸವೂ ತಾರಕಕ್ಕೇರಿತ್ತು. ಇಂತಹ ಪ್ರಕ್ಷುಬ್ಧ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು ರೂಪುಗೊಂಡಿರುವ ‘ಟಾಕ್ಸಿಕ್’ ಎಂದು ಇಂಗ್ಲಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಲಾಗಿದೆ ಒಂದು ವಿಶಿಷ್ಟ ಆಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ.

ಟಾಮಿ ಗನ್‌ಗಳ ಘರ್ಜನೆ, ಪವರ್‌ಗಾಗಿ ಮಹಾಯುದ್ಧ

1950-60ರ ದಶಕದ ವಿಂಟೇಜ್ ಕಾಲಘಟ್ಟವನ್ನು ಆಧಾರವಾಗಿಟ್ಟುಕೊಂಡಿರುವ ಈ ಸಿನಿಮಾದಲ್ಲಿ ಕಂಟ್ರಾಬ್ಯಾಂಡ್, ಬಂದರುಗಳ ಮೇಲಿನ ಹಿಡಿತ ಮತ್ತು ಗ್ಯಾಂಗ್‌ಸ್ಟರ್‌ಗಳ ನಡುವಿನ ಸಂಘರ್ಷ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. ಟಾಮಿ ಗನ್‌ಗಳ ಧಡಧಡ ಸದ್ದು, ವಿಂಟೇಜ್ ಲುಕ್‌ನ ಆಕ್ಷನ್ ದೃಶ್ಯಗಳು ಹಾಗೂ ಅಧಿಕಾರಕ್ಕಾಗಿ ನಡೆಯುವ ಕಾಳಗ ಚಿತ್ರದ ಪ್ರಮುಖ ಆಕರ್ಷಣೆಗಳಾಗಲಿವೆ. ಹಣ ಮತ್ತು ಅಧಿಕಾರದ ಮೇಲಿನ ಅತಿಯಾದ ಆಸೆಯಿಂದ ಹುಟ್ಟಿಕೊಳ್ಳುವ ಕುತಂತ್ರಗಳು ಕಥೆಯನ್ನು ಮತ್ತಷ್ಟು ರೋಚಕವಾಗಿಸಲಿವೆ.



Source link

Scroll to Top